Back to Languages

Kannada - Chapter 10 - Yunus

Translation by Abdussalam Puthige — Permalink

Verse 13 — Surah Yunus 10:13

ಬಹಳ ಸ್ಪಷ್ಟವಾದ ನಮ್ಮ ವಚನಗಳನ್ನು ಅವರಿಗೆ ಓದಿ ಕೇಳಿಸಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ಇದರ ಬದಲಿಗೆ ಬೇರೊಂದು ಕುರ್‌ಆನ್ ಅನ್ನು ತನ್ನಿರಿ ಅಥವಾ ಇದನ್ನು ತಿದ್ದಿರಿ ಎನ್ನುತ್ತಾರೆ. (ದೂತರೇ,) ಹೇಳಿರಿ; ನನ್ನ ಇಚ್ಛೆಯಿಂದ ಇದನ್ನು ತಿದ್ದುವ ಅಧಿಕಾರ ನನಗಿಲ್ಲ. ನಾನಂತು ನನ್ನೆಡೆಗೆ ಕಳಿಸಲಾಗಿರುವ ದಿವ್ಯವಾಣಿಯನ್ನು ಮಾತ್ರ ಅನುಸರಿಸುತ್ತೇನೆ. ಒಂದು ವೇಳೆ ನಾನು ನನ್ನ ಒಡೆಯನ ಆಜ್ಞೆಯನ್ನು ಮೀರಿ ನಡೆದರೆ, ಒಂದು ಮಹಾನ್ ದಿನದ ಶಿಕ್ಷೆಯ ಭಯ ನನಗಿದೆ