ನೀವು ಇರುವ ಪ್ರತಿಯೊಂದು ಸನ್ನಿವೇಶಕ್ಕೆ , ಕುರ್‌ಆನ್‌ನ ಯಾವುದೇ ಭಾಗವನ್ನು ನೀವು ಓದಿದ್ದಕ್ಕೆ , ಮತ್ತು ನೀವು ನಿರತರಾಗಿರುವ ಪ್ರತಿಯೊಂದು ಕರ್ಮಕ್ಕೆ ನಾವು (ಅಲ್ಲಾಹನು) ಸಾಕ್ಷಿಯಾಗದೆ ಇರುವುದಿಲ್ಲ. ಹಾಗೆಯೇ, ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಇರುವ, ಕಣಗಾತ್ರದ ವಸ್ತು ಕೂಡಾ ನಿಮ್ಮ ಒಡೆಯನಿಂದ ಮರೆಯಾಗಿರುವುದಿಲ್ಲ. ಮಾತ್ರವಲ್ಲ, ಅದಕ್ಕಿಂತಲೂ ಸಣ್ಣದಾದ ಅಥವಾ ದೊಡ್ಡದಾದ ಯಾವ ವಸ್ತುವೂ ಒಂದು ಸ್ಪಷ್ಟವಾದ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ