Back to Languages

Kannada - Chapter 10 - Yunus

Translation by Abdussalam Puthige — Permalink

Verse 69 — Surah Yunus 10:69

ಅವರಿಗೆ ನೂಹ್‌ರ ಸಂಗತಿಯನ್ನು ಓದಿ ಕೇಳಿಸಿರಿ. ಅವರು ತಮ್ಮ ಜನಾಂಗದೊಡನೆ ಹೇಳಿದರು; ನನ್ನ ಜನಾಂಗದವರೇ, ನನ್ನ ಅಸ್ತಿತ್ವ ಹಾಗೂ ಅಲ್ಲಾಹನ ವಚನಗಳ ಮೂಲಕ ನಾನು ನಿಮಗೆ ನೀಡುತ್ತಿರುವ ಉಪದೇಶವು ನಿಮಗೆ ತುಂಬಾ ಭಾರವಾಗುತ್ತಿದ್ದರೆ (ನಿಮಗೆ ತಿಳಿದಿರಲಿ;) ನಾನಂತು ಅಲ್ಲಾಹನಲ್ಲಿ ಭರವಸೆ ಇಟ್ಟಿದ್ದೇನೆ. ನೀವು ಮತ್ತು (ದೇವತ್ವದಲ್ಲಿನ) ನಿಮ್ಮ ಪಾಲುದಾರರು ಸೇರಿ (ನನ್ನ ವಿರುದ್ಧ) ನಿಮ್ಮ ಯೋಜನೆಯನ್ನು ಪಕ್ವಗೊಳಿಸಿರಿ. ನಿಮ್ಮ ಯೋಜನೆಯಲ್ಲಿ ನಿಮಗೆ ಯಾವುದೇ ಗೊಂದಲ ಉಳಿಯದಿರಲಿ. ಆ ಬಳಿಕ ನೀವು ನನ್ನ ವಿರುದ್ಧ ಕಾರ್ಯಾಚರಣೆಗೆ ಇಳಿಯಿರಿ. ನನಗೆ ನೀವು ಯಾವುದೇ ಕಾಲಾವಕಾಶವನ್ನೂ ಕೊಡಬೇಡಿ