ಅವರ (ಕಾಲದ) ದೇವದೂತರು, ‘‘ಆಕಾಶಗಳನ್ನು ಮತ್ತು ಭೂಮಿಯನ್ನು ರೂಪಿಸಿದ ಅಲ್ಲಾಹನ ಕುರಿತು ಸಂಶಯವೇ? ಅವನಂತು ನಿಮ್ಮನ್ನು ನಿಮ್ಮ ಪಾಪಗಳಿಂದ ಮುಕ್ತ ಗೊಳಿಸಲಿಕ್ಕಾಗಿ ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲಿಕ್ಕಾಗಿ ನಿಮ್ಮನ್ನು ಆಮಂತ್ರಿಸುತ್ತಿದ್ದಾನೆ’’ ಎಂದರು. ಅದಕ್ಕವರು ಹೇಳಿದರು; ನೀವು ಕೇವಲ ನಮ್ಮಂತಹ ಮಾನವರು. ನಮ್ಮ ತಂದೆ ತಾತಂದಿರು ಪೂಜಿಸುತ್ತಿದ್ದವುಗಳಿಂದ ನೀವು ನಮ್ಮನ್ನು ತಡೆಯ ಬಯಸುತ್ತೀರಿ. ನೀವೀಗ ನಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯನ್ನು (ಪವಾಡವನ್ನು) ತನ್ನಿರಿ