ತನ್ನ ನೂಲನ್ನು ಕಷ್ಟಪಟ್ಟು ನುಲಿದ ಬಳಿಕ ತಾನೇ ಅದನ್ನು ಚೂರು ಚೂರಾಗಿಸಿ ಬಿಟ್ಟವಳಂತೆ ನೀವಾಗಬೇಡಿ. ಒಂದು ಪಂಗಡವು ಇನ್ನೊಂದು ಪಂಗಡದೆದುರು ಮೇಲ್ಮೆ ಸಾಧಿಸಬಾರದೆಂದು, ಪರಸ್ಪರ ವಂಚಿಸಲಿಕ್ಕಾಗಿ ನೀವು ನಿಮ್ಮ ಪ್ರತಿಜ್ಞೆಗಳನ್ನು ನೆಪವಾಗಿ ಬಳಸುತ್ತೀರಿ. ನಿಜವಾಗಿ, ಈ (ಪ್ರತಿಜ್ಞೆಗಳ) ಮೂಲಕ ಅಲ್ಲಾಹನು ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ನೀವು (ಪರಸ್ಪರ) ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಅವನು ಪುನರುತ್ಥಾನ ದಿನ ನಿಮಗೆ ವಿವರಿಸಲಿದ್ದಾನೆ