ನೀವು ಕಾಣುವಿರಿ – ಸೂರ್ಯನು ಉದಯಿಸಿದಾಗ ಅದು (ಅದರ ಬೆಳಕು) ಅವರ ಗುಹೆಯ ಬಲಭಾಗದಿಂದ ಹಾದು ಹೋಗುತ್ತಿತ್ತು ಮತ್ತು ಅದು ಅಸ್ತಮಿಸುವಾಗ ಅವರನ್ನು ತಪ್ಪಿಸಿಕೊಂಡು ಅವರ ಎಡಭಾಗದಿಂದ ಹಾದು ಹೋಗುತ್ತಿತ್ತು. ಅವರು ಅದರ (ಗುಹೆಯ) ಒಂದು ವಿಶಾಲ ಭಾಗದಲ್ಲಿದ್ದರು. ಇವೆಲ್ಲಾ ಅಲ್ಲಾಹನ ಸೂಚನೆಗಳು. ಅಲ್ಲಾಹನು ಯಾರಿಗೆ ದಾರಿತೋರಿದನೋ ಅವನು ಸರಿದಾರಿಯನ್ನು ಪಡೆದನು. ಇನ್ನು ಅವನು ಯಾರನ್ನು ದಾರಿಗೆಡಿಸಿದನೋ ಅವನು ತನಗಾಗಿ ಯಾವುದೇ ರಕ್ಷಕ ಅಥವಾ ಮಾರ್ಗದರ್ಶಿಯನ್ನು ಕಾಣಲಾರನು