(ದೂತರೇ,) ನೀವೀಗ ಅವರ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತಮಾನಕ್ಕೆ ಮುಂಚೆಯೂ ರಾತ್ರಿಯ ಕೆಲವು ಕ್ಷಣಗಳಲ್ಲೂ ನಿಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಹಗಲಿನ ಗಡಿಭಾಗದಲ್ಲಿ (ಅಲ್ಲಾಹನ) ಪಾವಿತ್ರವನ್ನು ಜಪಿಸಿರಿ – ನೀವು ಸಂತೃಪ್ತರಾಗಬಹುದು