ಒಂದು ವೇಳೆ ನಾವು ಇದಕ್ಕೆ (ಕುರ್‌ಆನ್‌ನ ಆಗಮನಕ್ಕೆ) ಮುಂಚೆಯೇ ಅವರನ್ನು ಒಂದು ಶಿಕ್ಷೆಯ ಮೂಲಕ ನಾಶಮಾಡಿ ಬಿಟ್ಟಿದ್ದರೆ ಅವರು ‘‘ನಮ್ಮೊಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು, ಅಪಮಾನಿತರಾಗುವ ಹಾಗೂ ನಿಂದ್ಯರಾಗುವ ಮುನ್ನ ನಿನ್ನ ವಚನಗಳನ್ನು ಅನುಸರಿಸುತ್ತಿದ್ದವು’’ ಎನ್ನುತ್ತಿದ್ದರು