Back to Languages

Kannada - Chapter 24 - An-Nur

Translation by Abdussalam Puthige — Permalink

Verse 29 — Surah An-Nur 24:29

ಇನ್ನು ವಿವಾಹವಾಗಲು ಸಾಧ್ಯವಾಗದವರು, ಅಲ್ಲಾಹನು ತನ್ನ ಅನುಗ್ರಹದಿಂದ ತಮ್ಮನ್ನು ಸಂಪನ್ನಗೊಳಿಸುವ ತನಕ ತಮ್ಮನ್ನು ನಿಯಂತ್ರಿಸಿಕೊಂಡಿರಲಿ. ನಿಮ್ಮ ದಾಸ್ಯದಲ್ಲಿರುವವರ ಪೈಕಿ (ಬಿಡುಗಡೆಯ) ಒಪ್ಪಂದ ಮಾಡಿಕೊಳ್ಳಲು ಬಯಸುವವರಲ್ಲಿ ಏನಾದರೂ ಒಳಿತು ಇದೆ ಎಂದು ನಿಮಗೆ ತಿಳಿದಿದ್ದರೆ ನೀವು ಅವರ ಜೊತೆ ಒಪ್ಪಂದ ಮಾಡಿಕೊಳ್ಳಿರಿ ಮತ್ತು ಅಲ್ಲಾಹನು ನಿಮಗೆ ಕೊಟ್ಟಿರುವ ಸಂಪತ್ತಿನ ಒಂದು ಭಾಗವನ್ನು ಅವರಿಗೆ ಕೊಡಿರಿ. ಮತ್ತು ನಿಮ್ಮ ದಾಸಿಯರು ಸುಶೀಲೆಯರಾಗಿರಲು ಬಯಸುತ್ತಿರುವಾಗ ನೀವು ಕೇವಲ ಲೌಕಿಕ ಬದುಕಿನ ಲಾಭಕ್ಕಾಗಿ ಅವರನ್ನು ಅನೈತಿಕ ಕೃತ್ಯಕ್ಕೆ ಬಲವಂತ ಪಡಿಸಬೇಡಿ. ಇನ್ನು ಯಾರಾದರೂ ಅವರ ಮೇಲೆ ಬಲವಂತ ನಡೆಸಿದರೆ, ಆ ಬಳಿಕ (ಆ ದಾಸಿಯರ ಪಾಲಿಗೆ) ಅಲ್ಲಾಹನು ಖಂಡಿತವಾಗಿಯೂ ಕ್ಷಮಾಶೀಲನೂ ಕರುಣಾಳುವೂ ಆಗಿರುತ್ತಾನೆ