ನೀವು ನೋಡಲಿಲ್ಲವೇ, ಅಲ್ಲಾಹನು ಮೋಡಗಳನ್ನು ಚಲಾಯಿಸುತ್ತಾನೆ. ಆ ಬಳಿಕ ಅವನು ಅವುಗಳನ್ನು ಪರಸ್ಪರ ಜೋಡಿಸುತ್ತಾನೆ. ತರುವಾಯ ಅವನು ಅವುಗಳನ್ನು ಪದರಗಳಾಗಿಸುತ್ತಾನೆ. ಅನಂತರ ಅದರೊಳಗಿಂದ ಮಳೆಯು ಹೊರಡುವುದನ್ನು ನೀವು ಕಾಣುತ್ತೀರಿ. ಮತ್ತು ಆಕಾಶದಿಂದ ಹಿಮ ತುಂಬಿದ ಪರ್ವತಗಳೇ ಇಳಿಯತೊಡಗುತ್ತವೆ. ಆಮೂಲಕ ಅವನು ತಾನಿಚ್ಛಿಸಿದವರನ್ನು ವಿಪತ್ತಿಗೆ ಸಿಲುಕಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅದರಿಂದ ರಕ್ಷಿಸುತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕುರುಡಾಗಿಸುವಂತಿರುತ್ತದೆ