ವಿಶ್ವಾಸಿಗಳೇ, ನಿಮ್ಮ ದಾಸರು ಮತ್ತು ನಿಮ್ಮ ಪೈಕಿ ಇನ್ನೂ ಪ್ರಬುದ್ಧ ವಯಸ್ಸನ್ನು ತಲುಪಿಲ್ಲದವರು, ಮೂರು ಹೊತ್ತು ನಿಮ್ಮ ಅನುಮತಿ ಪಡೆದು ನಿಮ್ಮಲ್ಲಿಗೆ ಬರಲಿ – ಮುಂಜಾವಿನ ನಮಾಝ್‌ಗೆ ಮುನ್ನ, ಹಾಗೂ ಮಧ್ಯಾಹ್ನ, ನೀವು ನಿಮ್ಮ ಮೇಲುಡುಗೆಗಳನ್ನು ಇಳಿಸಿಡುವ ಹೊತ್ತಿನಲ್ಲಿ ಮತ್ತು ಇಶಾ (ರಾತ್ರಿ) ನಮಾಝ್‌ನ ಬಳಿಕ. ಇವು ನಿಮ್ಮ ಪಾಲಿಗೆ ಮರೆಯಲ್ಲಿರುವ (ವಿರಾಮದ) ಸಮಯಗಳು. ಈ ಸಮಯಗಳು ಕಳೆದ ಬಳಿಕ (ಅವರು ಅನುಮತಿ ಪಡೆಯದೆ ಬಂದರೆ) ನಿಮ್ಮ ಮೇಲಾಗಲಿ ಅವರ ಮೇಲಾಗಲಿ ಪಾಪವೇನಿಲ್ಲ. ನೀವು ಪರಸ್ಪರರ ಸುತ್ತಮುತ್ತಲೇ ಇರಬೇಕಾಗುತ್ತದೆ. ಈ ರೀತಿ ಅಲ್ಲಾಹನು (ತನ್ನ) ಆದೇಶಗಳನ್ನು ನಿಮಗೆ ವಿವರಿಸುತ್ತಾನೆ. ಅಲ್ಲಾಹನು ಬಲ್ಲವನು ಹಾಗೂ ಯುಕ್ತಿವಂತನಾಗಿದ್ದಾನೆ