ನೀವು ನಿಮ್ಮ ನಡುವೆ, ದೇವದೂತರ ಕರೆಯನ್ನು, ನೀವು ಪರಸ್ಪರರಿಗೆ ನೀಡುವ ಕರೆಯಂತೆ ಪರಿಗಣಿಸಬೇಡಿ. ನಿಮ್ಮ ಪೈಕಿ ಗುಟ್ಟಾಗಿ ತಪ್ಪಿಸಿಕೊಳ್ಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವನ ಆದೇಶಕ್ಕೆ ವಿರುದ್ಧವಾಗಿ ನಡೆಯುವವರು ಜಾಗೃತರಾಗಿರಲಿ. ಅವರ ಮೇಲೆ ವಿಪತ್ತೇನಾದರೂ ಬಂದೆರಗಬಹುದು ಅಥವಾ ಯಾತನಾಮಯ ಶಿಕ್ಷೆಗೆ ಅವರು ತುತ್ತಾಗಬಹುದು