ಅವರು ಎಲ್ಲೇ ಇರಲಿ, ಅವರ ಮೇಲೆ ಅಪಮಾನವನ್ನು ಹೇರಲಾಗಿದೆ – ಅಲ್ಲಾಹನ ಜೊತೆಗಿನ ಕರಾರು ಅಥವಾ ಜನರ ಜೊತೆಗಿನ ಕರಾರಿನ ಆಧಾರದಲ್ಲಿ ಅವರು ಪಡೆಯುವ ತಾತ್ಕಾಲಿಕ ರಕ್ಷಣೆಯು ಮಾತ್ರ ಇದಕ್ಕೆ ಹೊರತಾಗಿದೆ. ಅವರು ಅಲ್ಲಾಹನ ಕ್ರೋಧವನ್ನು ಸಂಪಾದಿಸಿಕೊಂಡಿದ್ದಾರೆ ಮತ್ತು ಅವರ ಮೇಲೆ ದಾರಿದ್ರವನ್ನು ಹೇರಿ ಬಿಡಲಾಗಿದೆ. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ಧಿಕ್ಕರಿಸುತ್ತಿದ್ದರು ಹಾಗೂ ಅನ್ಯಾಯವಾಗಿ ಪ್ರವಾದಿಗಳ ಹತ್ಯೆ ನಡೆಸುತ್ತಿದ್ದರು ಮತ್ತು ಅವರು ಅವಿಧೇಯರಾಗಿದ್ದರು ಹಾಗೂ ಮಿತಿ ಮೀರುವವರಾಗಿದ್ದರು