ನೀವು ಎಂಥವರೆಂದರೆ, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವಾದರೂ ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ನೀವು ಎಲ್ಲ ಗ್ರಂಥಗಳಲ್ಲಿ ನಂಬಿಕೆ ಇಡುತ್ತೀರಿ. (ಇಷ್ಟಾಗಿಯೂ) ಅವರು ನಿಮ್ಮನ್ನು ಭೇಟಿಯಾದಾಗ ‘‘ನಾವು ನಂಬಿದೆವು’’ ಎನ್ನುತ್ತಾರೆ, ಆದರೆ ತಾವು ಒಂಟಿಯಾಗಿರುವಾಗ ನಿಮ್ಮ ವಿರುದ್ಧ ಆಕ್ರೋಶದಿಂದ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. ಹೇಳಿರಿ; ‘‘ನೀವು ಆ ನಿಮ್ಮ ಕೋಪದಲ್ಲೇ ಸಾಯಿರಿ. ಖಂಡಿತವಾಗಿಯೂ ಅಲ್ಲಾಹನು ಮನದೊಳಗಿನ ವಿಷಯಗಳನ್ನೂ ಅರಿತಿರುತ್ತಾನೆ’’