Back to Languages

Kannada - Chapter 3 - Al-Imran

Translation by Abdussalam Puthige — Permalink

Verse 151 — Surah Al-Imran 3:151

ಅಲ್ಲಾಹನು ನಿಮಗೆ ನೀಡಿದ ತನ್ನ ಭರವಸೆಯನ್ನು ಈಡೇರಿಸಿರುವನು. (ಉಹುದ್ ಯುದ್ಧದ ಆರಂಭದಲ್ಲಿ) ನೀವು ಅವನ ಅನುಮತಿಯಂತೆ, ಅವರನ್ನು (ಶತ್ರು ಸೇನೆಯನ್ನು) ಧ್ವಂಸಗೊಳಿಸತೊಡಗಿದ್ದಿರಿ. ಆದರೆ ನೀವು ಬಯಸಿದ್ದನ್ನು (ಸಮರಾರ್ಜಿತ ಸಂಪತ್ತನ್ನು) ನಿಮಗೆ ತೋರಿಸಲಾದ ಬಳಿಕ ನೀವು ಅಧೈರ್ಯ ಪ್ರದರ್ಶಿಸಿದಿರಿ, (ರಣನೀತಿಗೆ ಸಂಬಂಧಿಸಿದ) ಆದೇಶದ ಕುರಿತು ಜಗಳಾಡತೊಡಗಿದಿರಿ ಮತ್ತು ಅವಿಧೇಯತೆ ತೋರಿದಿರಿ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಅಪೇಕ್ಷಿಸುತ್ತಿದ್ದರು ಮತ್ತು ಕೆಲವರು ಪರಲೋಕವನ್ನು ಅಪೇಕ್ಷಿಸುತ್ತಿದ್ದರು. ಕೊನೆಗೆ ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ ಅವರೆದುರು ನಿಮಗೆ ಹಿನ್ನಡೆ ನೀಡಿದನು. ಅವನು ಖಂಡಿತ ನಿಮ್ಮನ್ನು ಕ್ಷಮಿಸಿರುವನು. ಅಲ್ಲಾಹನು ವಿಶ್ವಾಸಿಗಳ ಪಾಲಿಗೆ ಸದಾ ಉದಾರಿಯಾಗಿರುತ್ತಾನೆ