ವಿಶ್ವಾಸಿಗಳೇ, ನೀವು ಧಿಕ್ಕಾರಿಗಳಂತಾಗಬೇಡಿ. ಅವರಂತು, ತಮ್ಮ ಸಹೋದರರು ಭೂಮಿಯಲ್ಲಿ ಪ್ರಯಾಣದಲ್ಲಿದ್ದಾಗ ಅಥವಾ ಯುದ್ಧದಲ್ಲಿದ್ದಾಗ (ಮೃತಪಟ್ಟರೆ) ‘‘ಒಂದು ವೇಳೆ ಅವರು ನಮ್ಮ ಜೊತೆ ಇದ್ದಿದ್ದರೆ ಖಂಡಿತ ಮೃತರಾಗುತ್ತಿರಲಿಲ್ಲ ಅಥವಾ ಹತರಾಗುತ್ತಿರಲಿಲ್ಲ’’ ಎನ್ನುತ್ತಾರೆ. ಅಲ್ಲಾಹನು ಈ ಮೂಲಕ ಅವರ ಮನಗಳಲ್ಲಿ ಹತಾಶೆಯನ್ನಷ್ಟೇ ಬೆಳೆಸುತ್ತಾನೆ. ನಿಜವಾಗಿ ಜೀವನ ನೀಡುವವನೂ, ಮರಣ ನೀಡುವವನೂ ಅಲ್ಲಾಹನೇ. ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ನೋಡುತ್ತಿದ್ದಾನೆ