‘‘ನಮ್ಮೊಡೆಯಾ, ವಿಶ್ವಾಸದೆಡೆಗೆ ನಮ್ಮನ್ನು ಕರೆಯುತ್ತಿದ್ದ ಹಾಗೂ ‘‘ನಿಮ್ಮ ಒಡೆಯನಲ್ಲಿ ವಿಶ್ವಾಸವಿಡಿರಿ’’ ಎನ್ನುತ್ತಿದ್ದವನ ಕರೆಯನ್ನು ನಾವು ಕೇಳಿದೆವು ಮತ್ತು ನಾವು ವಿಶ್ವಾಸವಿಟ್ಟೆವು. ನಮ್ಮೊಡೆಯಾ, ನಮಗಾಗಿ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮ ಕೆಡುಕುಗಳನ್ನೆಲ್ಲಾ ನಮ್ಮಿಂದ ದೂರಗೊಳಿಸು ಮತ್ತು ನಮಗೆ ಸಜ್ಜನರ ಸಂಗದಲ್ಲಿ ಮರಣವನ್ನು ನೀಡು’’