ಕೊನೆಗೆ ಆಕೆ ಅದನ್ನು (ಶಿಶುವನ್ನು) ಹೆತ್ತಾಗ ‘‘ಒಡೆಯಾ, ನಾನು ಹೆಣ್ಣು ಮಗುವನ್ನು ಹೆತ್ತಿರುವೆನು’’ ಎಂದರು. ನಿಜವಾಗಿ ಆಕೆ ಏನನ್ನು ಹೆತ್ತಿದ್ದಳೆಂಬುದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲದೆ ಗಂಡು ಮಗು ಹೆಣ್ಣಿನಂತಿರುವುದಿಲ್ಲ. (ಆಕೆ ಹೇಳಿದರು;) ‘‘ನಾನು ಈ ಮಗುವನ್ನು ಮರ್ಯಮ್ ಎಂದು ಹೆಸರಿಸಿದ್ದೇನೆ ಮತ್ತು ಇವಳನ್ನು ಹಾಗೂ ಇವಳ ಸಂತತಿಯನ್ನು ಶಪಿತ ಶೈತಾನನಿಂದ ಕಾಪಾಡಲಿಕ್ಕಾಗಿ ನಿನ್ನ ರಕ್ಷಣೆಗೆ ಒಪ್ಪಿಸುತ್ತಿದ್ದೇನೆ’’