Back to Languages

Kannada - Chapter 3 - Al-Imran

Translation by Abdussalam Puthige — Permalink

Verse 49 — Surah Al-Imran 3:49

‘‘ಮತ್ತು ಅವನು ಅವರನ್ನು ಇಸ್ರಾಈಲರ ಸಂತತಿಯೆಡೆಗೆ ತನ್ನ ದೂತನಾಗಿ ನೇಮಿಸುವನು’’. (ಅವರು ಹೇಳುವರು;) ‘‘ನಾನು ನಿಮ್ಮೊಡೆಯನ ಕಡೆಯಿಂದ ಒಂದು ಪುರಾವೆಯೊಂದಿಗೆ ನಿಮ್ಮ ಬಳಿಗೆ ಬಂದಿರುವೆನು. ನಾನಿದೋ ನಿಮಗಾಗಿ ಮಣ್ಣಿನಿಂದ ಒಂದು ಪಕ್ಷಿಯ ರೂಪವನ್ನು ನಿರ್ಮಿಸುವೆನು ಮತ್ತು ಅದರೊಳಗೆ ಊದುವೆನು. ಅದು ಅಲ್ಲಾಹನ ಅಪ್ಪಣೆಯಿಂದ (ಜೀವಂತ) ಪಕ್ಷಿಯಾಗಿ ಬಿಡುವುದು. ಹಾಗೆಯೇ ನಾನು, ಅಲ್ಲಾಹನ ಆದೇಶಾನುಸಾರ ಹುಟ್ಟು ಕುರುಡನನ್ನು ಹಾಗೂ ಕುಷ್ಟರೋಗಿಯನ್ನು ಗುಣಪಡಿಸುವೆನು ಮತ್ತು ಮೃತನನ್ನು ಜೀವಂತಗೊಳಿಸುವೆನು. ನೀವು ಏನನ್ನು ತಿನ್ನುತ್ತೀರಿ ಮತ್ತು ನಿಮ್ಮ ಮನೆಗಳಲ್ಲಿ ಏನನ್ನು ಸಂಗ್ರಹಿಸಿಡುತ್ತೀರಿ ಎಂಬುದನ್ನು ನಾನು ನಿಮಗೆ ತಿಳಿಸುವೆನು. ನೀವು ನಂಬುವವರಾಗಿದ್ದರೆ ಇದರಲ್ಲಿ ನಿಮಗೆ ಪುರಾವೆ ಇದೆ’’