(ಇಷ್ಟಾಗಿಯೂ) ಅವರ ಕಡೆಯಿಂದ ಧಿಕ್ಕಾರವೇ ಕಂಡಾಗ ಈಸಾ, ‘‘ಯಾರಿದ್ದಾರೆ, ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರು?’’ ಎಂದು ಕೇಳಿದರು. (ಅವರ) ನಿಷ್ಠ ಅನುಯಾಯಿಗಳು ಹೇಳಿದರು; ‘‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ನಂಬಿಕೆ ಇಟ್ಟಿರುವೆವು. ನಾವು ಮುಸ್ಲಿಮರಾಗಿದ್ದೇವೆಂಬುದಕ್ಕೆ ನೀವು ಸಾಕ್ಷಿಯಾಗಿರಿ’’