Back to Languages

Kannada - Chapter 3 - Al-Imran

Translation by Abdussalam Puthige — Permalink

Verse 75 — Surah Al-Imran 3:75

ನೀವು ನಂಬಿಕೆ ಇಟ್ಟು ರಾಶಿಗಟ್ಟಲೆ ಸಂಪತ್ತನ್ನು ವಶಕ್ಕೊಪ್ಪಿಸಿದರೆ ಅದನ್ನು (ಸುರಕ್ಷಿತವಾಗಿ) ನಿಮಗೆ ಮರಳಿಸುವವರೂ ಗ್ರಂಥದವರಲ್ಲಿದ್ದಾರೆ. ಹಾಗೆಯೇ, ನೀವು ನಂಬಿಕೆ ಇಟ್ಟು ಕೇವಲ ಒಂದು ಚಿನ್ನದ ನಾಣ್ಯವನ್ನು ವಶಕ್ಕೊಪ್ಪಿಸಿದರೆ, ನೀವು ಸತತವಾಗಿ ಬೆನ್ನು ಹಿಡಿಯದಿದ್ದರೆ, ಅದನ್ನು ನಿಮಗೆ ಮರಳಿಸದವರೂ ಅವರಲ್ಲಿದ್ದಾರೆ. ಇದೇಕೆಂದರೆ ಅವರು ‘‘ಉಮ್ಮೀಗಳಿಗೆ (ಅನ್ಯ ಸಮುದಾಯದವರಿಗೆ) ನಮ್ಮ ವಿರುದ್ಧ ಯಾವ ಹಕ್ಕೂ ಇಲ್ಲ’’ ಎನ್ನುವವರಾಗಿದ್ದಾರೆ. ನಿಜವಾಗಿ ಅವರು (ಸತ್ಯವು) ತಮಗೆ ತಿಳಿದಿದ್ದರೂ ಅಲ್ಲಾಹನ ಕುರಿತು ಸುಳ್ಳು ಹೇಳುತ್ತಿದ್ದಾರೆ