ಧಿಕ್ಕಾರಿಗಳು, ‘‘ನಮ್ಮ ಪಾಲಿಗೆ ಲೋಕಾಂತ್ಯದ ಕ್ಷಣ ಎಂದೂ ಬರಲಾರದು‘‘ ಎನ್ನುತ್ತಾರೆ. ನೀವು ಹೇಳಿರಿ; ಯಾಕಿಲ್ಲ ? ನನ್ನೊಡೆಯನಾಣೆ, ಅದು ಖಂಡಿತ ನಿಮ್ಮ ಮೇಲೆ ಬಂದೆರಗುವುದು. ಅವನು ಎಲ್ಲ ಗುಪ್ತ ವಿಷಯಗಳನ್ನೂ ಬಲ್ಲವನು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಇರುವ ಒಂದು ಅಣು ಗಾತ್ರದ ವಸ್ತು ಕೂಡಾ ಅವನಿಂದ ಮರೆಯಾಗಿರುವುದಿಲ್ಲ. ಇನ್ನು, ಅದಕ್ಕಿಂತ ಸಣ್ಣ ಅಥವಾ ದೊಡ್ಡ ಯಾವ ವಿಷಯವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ