Back to Languages

Kannada - Chapter 34 - Saba

Translation by Abdussalam Puthige — Permalink

Verse 42 — Surah Saba 34:42

ಅವರಿಗೆ, ಬಹಳ ಸ್ಪಷ್ಟವಾಗಿರುವ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು, ‘‘ಈ ವ್ಯಕ್ತಿ ನಿಮ್ಮನ್ನು, ನಿಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ತಡೆದು ದೂರವಿಡಲು ಬಯಸುತ್ತಾನೆ’’ ಎನ್ನುತ್ತಾರೆ. ಮತ್ತು ಅವರು ‘‘ಇದು ಕೇವಲ ಕಟ್ಟುಕತೆಯಲ್ಲದೆ ಬೇರೇನೂ ಅಲ್ಲ’’ ಎನ್ನುತ್ತಾರೆ. ಇನ್ನು ಸತ್ಯವು ತಮ್ಮ ಬಳಿಗೆ ಬಂದಾಗ, ಧಿಕ್ಕಾರಿಗಳು ಅದರ ಕುರಿತು ‘‘ಇದು ಸ್ಪಷ್ಟವಾದ ಇಂದ್ರಜಾಲವೇ ಹೊರತು ಬೇರೇನೂ ಅಲ್ಲ’’ ಎನ್ನುತ್ತಾರೆ