ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು ಜೊತೆಗಳಾಗಿ ಮಾಡಿದನು. ಅವನ ಅರಿವಿನಲ್ಲಿಲ್ಲದೆ ಯಾವ ಹೆಣ್ಣೂ ಗರ್ಭ ಧರಿಸುವುದಿಲ್ಲ, ಹೆರುವುದೂ ಇಲ್ಲ. ಒಬ್ಬ ವ್ಯಕ್ತಿಯ ವಯಸ್ಸಿನಲ್ಲಿ ಆಗುವ ಹೆಚ್ಚಳವಿರಲಿ, ಅವನ ವಯಸ್ಸಿನಲ್ಲಾಗುವ ಕಡಿತವಿರಲಿ, ಎಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿದೆ. ಇದೆಲ್ಲವೂ ಅಲ್ಲಾಹನ ಪಾಲಿಗೆ ಖಂಡಿತ ಸುಲಭವಾಗಿದೆ