ಎರಡು ಕಡಲುಗಳು ಒಂದೇ ತೆರನಾಗಿಲ್ಲ. ಒಂದು ಸಿಹಿಯಾಗಿದ್ದು ದಾಹ ತಣಿಸುವಂತಿದೆ ಮತ್ತು ಕುಡಿಯಲು ಹಿತಕರವಾಗಿದೆ. ಇನ್ನೊಂದು ಖಾರವಾಗಿ ಕಹಿಯಾಗಿದೆ. ಆದರೆ ನೀವು ಅವೆರಡರಿಂದಲೂ (ವಿವಿಧ ಮೀನುಗಳ) ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವ (ಮುತ್ತಿನ) ಆಭರಣಗಳನ್ನು ಅವುಗಳಿಂದ ಹೊರತೆಗೆಯುತ್ತೀರಿ. ಮತ್ತು ನೀವು ಅವನ (ಅಲ್ಲಾಹನ) ಅನುಗ್ರಹಗಳನ್ನು ಅರಸುತ್ತಾ ಕೃತಜ್ಞತೆ ಸಲ್ಲಿಸುತ್ತಿರಲಿಕ್ಕಾಗಿ, ಅದರಲ್ಲಿ ಹಡಗುಗಳು (ನೀರನ್ನು) ಸೀಳುತ್ತಾ ಸಾಗುವುದನ್ನು ನೀವು ಕಾಣುತ್ತೀರಿ