Back to Languages

Kannada - Chapter 35 - Fatir

Translation by Abdussalam Puthige — Permalink

Verse 17 — Surah Fatir 35:17

(ಪುನರುತ್ಥಾನ ದಿನ) ಯಾವ ಹೊರೆ ಹೊರುವಾತನೂ ಇನ್ನೊಬ್ಬರ ಹೊರೆಯನ್ನು ಹೊರಲಾರನು. (ಪಾಪಗಳ) ಹೊರೆ ಹೊತ್ತವನು, ತನ್ನ ಹೊರೆಯೆಡೆಗೆ (ಅದನ್ನು ಹಂಚಿಕೊಳ್ಳಲು) ಯಾರನ್ನಾದರೂ ಕರೆದರೆ, ಯಾರೂ ಅದರ ಸಣ್ಣ ಭಾಗವನ್ನೂ ಹೊರಲಾರರು – ಅವನು ಅವರ ಹತ್ತಿರದ ಬಂಧುವಾಗಿದ್ದರೂ ಸರಿಯೇ! ತಮ್ಮ ಒಡೆಯನನ್ನು ಕಾಣದೆಯೇ ಅವನಿಗೆ ಅಂಜುತ್ತಿರುವವರನ್ನು ಹಾಗೂ ನಮಾಝನ್ನು ಪಾಲಿಸುತ್ತಿರುವವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಶುದ್ಧನಾಗಿರುವವನು ಸ್ವತಃ ತನ್ನ ಹಿತಕ್ಕಾಗಿ ಶುದ್ಧನಾಗುತ್ತಾನೆ. ಅಂತಿಮವಾಗಿ (ಎಲ್ಲರೂ) ಅಲ್ಲಹನೆಡೆಗೇ ಮರಳ ಬೇಕಾಗಿದೆ