Back to Languages

Kannada - Chapter 35 - Fatir

Translation by Abdussalam Puthige — Permalink

Verse 31 — Surah Fatir 35:31

ಮುಂದೆ, ನಮ್ಮ ದಾಸರ ಪೈಕಿ ನಾವು ಆರಿಸಿದವರನ್ನು ನಾವು ಗ್ರಂಥದ ಉತ್ತರಾಧಿಕಾರಿಗಳಾಗಿಸಿದೆವು. ಇದೀಗ ಅವರಲ್ಲಿ ಕೆಲವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುವವರಾಗಿದ್ದಾರೆ. ಅವರಲ್ಲಿ ಮಧ್ಯಮ ನಿಲುವಿನವರೂ ಇದ್ದಾರೆ ಮತ್ತು ಅವರಲ್ಲಿ ಅಲ್ಲಾಹನ ಆದೇಶದಂತೆ ಸತ್ಕಾರ್ಯಗಳಲ್ಲಿ ಸ್ಪರ್ಧಿಸಿ ಮುನ್ನಡೆಯುವವರೂ ಇದ್ದಾರೆ. ಇದು (ಉತ್ತರಾಧಿಕಾರವು) ಮಹಾ ಔದಾರ್ಯವಾಗಿದೆ