ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಚಿಸಿದವರಿಗೆ ಸರಿದಾರಿಯನ್ನು ತೋರಿಸುತ್ತಾನೆ. ನೀವು ಅವರ (ಧಿಕ್ಕಾರಿಗಳ) ಕುರಿತು ನೊಂದುಕೊಳ್ಳಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು