Back to Languages

Kannada - Chapter 4 - An-Nisa

Translation by Abdussalam Puthige — Permalink

Verse 152 — Surah An-Nisa 4:152

(ದೂತರೇ,) ಗ್ರಂಥದವರು ನಿಮ್ಮೊಡನೆ, ತಮಗಾಗಿ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಅವರು ಮೂಸಾರ ಮುಂದೆ ಇದಕ್ಕಿಂತ ದೊಡ್ಡ ಆಗ್ರಹಗಳನ್ನು ಮಂಡಿಸಿದ್ದರು ಮತ್ತು ‘‘ನಮಗೆ ವ್ಯಕ್ತವಾಗಿ ಅಲ್ಲಾಹನನ್ನು ತೋರಿಸಿ ಕೊಡಿರಿ’’ ಎಂದಿದ್ದರು. ಕೊನೆಗೆ, ಅವರ ಅಕ್ರಮಗಳ ಕಾರಣ ಅವರ ಮೇಲೆ ಸಿಡಿಲೆರಗಿ ಬಿಟ್ಟಿತು. ಮುಂದೆ, ತಮ್ಮ ಬಳಿಗೆ ಬಹಳ ಸ್ಪಷ್ಟ ಪುರಾವೆಗಳು ಬಂದ ಬಳಿಕವೂ ಅವರು ಕರುವನ್ನು (ದೇವರಾಗಿ) ನೆಚ್ಚಿಕೊಂಡರು. ಇಷ್ಟಿದ್ದೂ ನಾವು ಅವರನ್ನು ಕ್ಷಮಿಸಿದೆವು ಮತ್ತು ಮೂಸಾರಿಗೆ ಬಹಳ ಸ್ಪಷ್ಟವಾದ ಪ್ರಾಬಲ್ಯವನ್ನು ನೀಡಿದೆವು