(ದೂತರೇ,) ಅವರು ನಿಮ್ಮೊಡನೆ ತೀರ್ಪು ಕೇಳುತ್ತಾರೆ. ಹೇಳಿರಿ; ‘‘ಕಲಾಲಃ (ಉತ್ತರಾಧಿಕಾರಿಗಳಾಗಿ ತಂದೆ-ತಾಯಿಯಾಗಲಿ, ಮಕ್ಕಳಾಗಲಿ ಇಲ್ಲದವರು)ಗಳ ಕುರಿತು ಅಲ್ಲಾಹನು ನಿಮಗೆ ತೀರ್ಪು ನೀಡಿರುವನು. ಒಬ್ಬ ಪುರುಷನು ಮೃತನಾಗಿದ್ದು, ಅವನಿಗೆ ಮಕ್ಕಳಿಲ್ಲದೆ, ಒಬ್ಬ ಸಹೋದರಿ ಇರುವಳೆಂದಾದರೆ ಅವನು ಬಿಟ್ಟು ಹೋದ ಸೊತ್ತಿನಲ್ಲಿ ಆಕೆಗೆ ಅರ್ಧ ಭಾಗ ಸಿಗುವುದು. ಇನ್ನು ಮೃತ ವ್ಯಕ್ತಿ ಮಹಿಳೆಯಾಗಿದ್ದು ಆಕೆಗೆ ಮಕ್ಕಳಿಲ್ಲವಾದರೆ ಅವನು (ಸಹೋದರನು) ಆಕೆಯ ಉತ್ತರಾಧಿಕಾರಿಯಾಗುವನು. ಒಂದು ವೇಳೆ ಮೃತ ವ್ಯಕ್ತಿಗೆ ಇಬ್ಬರು ಸಹೋದರಿಯರು ಇದ್ದರೆ ಆತನು ಬಿಟ್ಟು ಹೋದ ಸೊತ್ತಿನಲ್ಲಿ ಅವರಿಗೆ ಮೂರನೇ ಎರಡು ಪಾಲು ಸಿಗುವುದು. ಹಲವು ಸಹೋದರರು ಮತ್ತು ಹಲವು ಸಹೋದರಿಯರಿದ್ದರೆ, ಸ್ತ್ರೀಯರಿಗೆ (ಸಹೋದರಿಯರಿಗೆ) ಸಿಗುವುದರ ಇಮ್ಮಡಿ ಪಾಲು, ಪುರುಷರಿಗೆ (ಸಹೋದರರಿಗೆ) ಸಿಗುವುದು. ನೀವು ದಾರಿ ತಪ್ಪಬಾರದೆಂದು ಅಲ್ಲಾಹನು ನಿಮಗೆ (ಇದನ್ನೆಲ್ಲಾ) ವಿವರಿಸುತ್ತಿದ್ದಾನೆ. ಅಲ್ಲಾಹನಂತೂ ಎಲ್ಲವನ್ನೂ ಬಲ್ಲವನಾಗಿದ್ದಾನೆ