ವಿಶ್ವಾಸಿಗಳೇ, ನೀವು ಬಲವಂತದಿಂದ ಮಹಿಳೆಯರ ಉತ್ತರಾಧಿಕಾರಿಗಳಾಗುವುದು ನಿಮ್ಮ ಪಾಲಿಗೆ ಸಮ್ಮತವಲ್ಲ. ಹಾಗೆಯೇ, ನೀವು ಅವರಿಗೆ ಏನನ್ನು ಕೊಟ್ಟಿರುವಿರೋ ಅದರಿಂದ ಏನನ್ನಾದರೂ ಮರಳಿ ಪಡೆಯಲಿಕ್ಕಾಗಿ ಅವರನ್ನು (ಮನೆಯಲ್ಲಿ) ತಡೆದಿಟ್ಟುಕೊಳ್ಳ ಬಾರದು – ಅವರೇನಾದರೂ ವ್ಯಕ್ತ ಅನೈತಿಕ ಕೃತ್ಯ ಎಸಗಿರುವುದರ ಹೊರತು. ಅವರ ಜೊತೆ ನೀವು ನಿಯಮಾನುಸಾರ ಬದುಕು ಸಾಗಿಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ (ನಿಮಗೆ ತಿಳಿದಿರಲಿ;) ನಿಮಗೊಂದು ವಸ್ತು ಅಪ್ರಿಯವಾಗಿರಬಹುದು ಮತ್ತು ಅದರಲ್ಲೇ ಅಲ್ಲಾಹನು (ನಿಮಗೆ) ಬಹಳಷ್ಟು ಹಿತವನ್ನು ಇಟ್ಟಿರಬಹುದು