– ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಜನಾಂಗಕ್ಕೆ ಸೇರಿದವರು ಅಥವಾ ನಿಮ್ಮ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಜನಾಂಗದ ವಿರುದ್ಧ ಹೋರಾಡುವುದಕ್ಕಾಗಲಿ ತಮ್ಮ ಮನದಲ್ಲಿ ಒಲವಿಲ್ಲದೆ, ನಿಮ್ಮ ಬಳಿಗೆ ಬಂದಿರುವವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹನು ಇಚ್ಛಿಸಿದ್ದರೆ ಅವರನ್ನು ನಿಮ್ಮ ಮೇಲೆ ಹೇರಿ ಬಿಡುತ್ತಿದ್ದನು ಮತ್ತು ಅವರು ನಿಮ್ಮ ವಿರುದ್ಧ ಖಂಡಿತ ಹೋರಾಡುತ್ತಿದ್ದರು. (ಇದೀಗ) ಅವರು ನಿಮ್ಮಿಂದ ದೂರ ಉಳಿದರೆ ಹಾಗೂ ನಿಮ್ಮ ವಿರುದ್ಧ ಹೋರಾಡದಿದ್ದರೆ ಮತ್ತು ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಟ್ಟರೆ – ಅಲ್ಲಾಹನು ಅವರ ವಿರುದ್ಧ (ಹೋರಾಡಲು) ನಿಮಗೆ ಯಾವ ಅವಕಾಶವನ್ನೂ ಇಟ್ಟಿಲ್ಲ