(ಕಾರ್ಯಾಚರಣೆಯಲ್ಲಿ ಭಾಗವಹಿಸದೆ) ಹಿಂದುಳಿದುಕೊಂಡ ಹಳ್ಳಿಯವರು, ‘‘ನಮ್ಮ ಸಂಪತ್ತು ಹಾಗೂ ನಮ್ಮ ಕುಟುಂಬಗಳು ನಮ್ಮನ್ನು ಕಾರ್ಯನಿರತವಾಗಿಟ್ಟಿದ್ದವು. ನೀವೀಗ ನಮ್ಮ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ’’ ಎಂದು ನಿಮ್ಮೊಡನೆ ಹೇಳುವರು. ನಿಜವಾಗಿ, ಅವರು ತಮ್ಮ ಮನಸ್ಸುಗಳಲ್ಲಿ ಇಲ್ಲದ ಮಾತನ್ನು ತಮ್ಮ ನಾಲಗೆಯಿಂದ ಹೇಳುತ್ತಾರೆ. ಅಲ್ಲಾಹನು ನಿಮಗೆ ಹಾನಿ ಮಾಡ ಬಯಸಿದರೂ ಹಿತವನ್ನು ಮಾಡಬಯಸಿದರೂ ಅವನೆದುರು ನಿಮಗೆ ನೆರವಾಗುವ ಅಧಿಕಾರ ಯಾರಿಗಿದೆ? ನೀವು ಮಾಡುತ್ತಿರುವ ಎಲ್ಲವುಗಳ ಕುರಿತು ಅವನಿಗೆ ಅರಿವಿದೆ