ಅಲ್ಲಾಹನು ನಿಜಕ್ಕೂ ತನ್ನ ದೂತರಿಗೆ ಸತ್ಯಕ್ಕನುಸಾರವಾದ ಕನಸನ್ನೇ ತೋರಿಸಿದ್ದನು; ಅಲ್ಲಾಹನಿಚ್ಛಿಸಿದರೆ ನೀವು ಖಂಡಿತ ಶಾಂತಿಯೊಂದಿಗೆ, ಮಸ್ಜಿದುಲ್ ಹರಾಮನ್ನು ಪ್ರವೇಶಿಸುವಿರಿ. (ಕೆಲವರು) ತಲೆಬೋಳಿಸಿಕೊಂಡು ಹಾಗೂ (ಕೆಲವರು) ಕೂದಲು ಕತ್ತರಿಸಿಕೊಂಡು (ಪ್ರವೇಶಿಸುವರು). ನಿಮಗೆ ಯಾವ ಭಯವೂ ಇರದು. ನಿಮಗೆ ತಿಳಿದಿಲ್ಲದ ಸಂಗತಿಗಳನ್ನು ಅವನು ತಿಳಿದಿರುವನು. ಇದು (ಮಕ್ಕಃ ವಿಜಯ) ಮಾತ್ರವಲ್ಲದೆ, ಬೇರೊಂದು ವಿಜಯವನ್ನೂ ಅವನು ಈಗಾಗಲೇ ನಿಮಗೆ ನೀಡಿರುವನು