Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 1 — Surah Al-Maidah 5:1

ವಿಶ್ವಾಸಿಗಳೇ, ಅಲ್ಲಾಹನ ಕುರುಹುಗಳಿಗೆ, (ನಾಲ್ಕು) ಪಾವನ ತಿಂಗಳುಗಳಿಗೆ, ಹರಕೆಗಳಿಗೆ (ಕಅ್ಬ: ಭವನಕ್ಕೆಂದು ಹರಕೆಗೆ ಬಿಡಲಾದ ಜಾನುವಾರುಗಳಿಗೆ), ಕೊರಳಲ್ಲಿ (ಹರಕೆಯ) ಪಟ್ಟಿ ಇರುವವುಗಳಿಗೆ ಮತ್ತು ತಮ್ಮೊಡೆಯನ ಅನುಗ್ರಹ ಹಾಗೂ ಮೆಚ್ಚುಗೆಯನ್ನು ಹುಡುಕುತ್ತಾ ಪವಿತ್ರ ಭವನ (ಕಅ್ಬ:)ದೆಡೆಗೆ ಹೊರಟವರಿಗೆ ಯಾವುದೇ ಅಪಚಾರ ಎಸಗಬೇಡಿ. ‘ಇಹ್ರಾಮ್’ನಿಂದ ಮುಕ್ತರಾದ ಬಳಿಕ ನೀವು ಬೇಟೆಯಾಡಬಹುದು. ಒಂದು ಜನಾಂಗವು ಪವಿತ್ರ ಭವನ (ಕಅ್ಬ:)ದಿಂದ ನಿಮ್ಮನ್ನು ತಡೆದ ಕಾರಣ ಅವರ ಮೇಲೆ ನಿಮಗಿರುವ ದ್ವೇಷವು, ಯಾವುದೇ ಅನ್ಯಾಯ ನಡೆಸುವುದಕ್ಕೆ ನಿಮ್ಮನ್ನು ಪ್ರಚೋದಿಸಬಾರದು. ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ (ಎಲ್ಲರ ಜೊತೆ) ಸಹಕರಿಸಿರಿ ಮತ್ತು ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರ ಜೊತೆಗೂ) ಸಹಕರಿಸಬೇಡಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಖಂಡಿತ ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ