Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 106 — Surah Al-Maidah 5:106

ತರುವಾಯ ಅವರಿಬ್ಬರೂ ಸತ್ಯವನ್ನು ಮರೆಮಾಚುವ ಪಾಪ ಕೃತ್ಯವನ್ನು ಎಸಗಿರುವರೆಂದು ತಿಳಿದು ಬಂದರೆ, ಅವರ ಸ್ಥಾನದಲ್ಲಿ, ಹಕ್ಕುವಂಚಿತರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ನಿಕಟ ಬಂಧುಗಳಾಗಿರುವ ಇಬ್ಬರು ಸಾಕ್ಷಿಗಳಾಗಿ ನಿಲ್ಲಲಿ. ಅವರಿಬ್ಬರು ಅಲ್ಲಾಹನ ಆಣೆ ಹಾಕಿ, ‘‘ನಮ್ಮ ಸಾಕ್ಷವು ಅವರಿಬ್ಬರ ಸಾಕ್ಷಕ್ಕಿಂತ ಹೆಚ್ಚು ಪಕ್ವವಾಗಿದೆ. ನಾವು ಯಾವುದೇ ಅತಿರೇಕವನ್ನೆಸಗಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದರೆ, ನಾವು ಅಕ್ರಮಿಗಳ ಸಾಲಿಗೆ ಸೇರುವೆವು’’ ಎಂದು ಪ್ರಮಾಣ ಮಾಡಲಿ