Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 11 — Surah Al-Maidah 5:11

ಅಲ್ಲಾಹನು ಇಸ್ರಾಈಲರ ಸಂತತಿಗಳಿಂದ ಕರಾರನ್ನು ಪಡೆದಿದ್ದನು. ನಾವು (ಅಲ್ಲಾಹ್) ಅವರ ಪೈಕಿ 12 ಮಂದಿಯನ್ನು ನೇತಾರರಾಗಿ ನೇಮಿಸಿದ್ದೆವು. ಅವರೊಡನೆ ಅಲ್ಲಾಹನು ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ. ನೀವು ನಮಾಝ್‌ನ ಪಾಲನೆ ಮಾಡುತ್ತಲಿದ್ದರೆ, ಝಕಾತ್ ಅನ್ನು ಪಾವತಿಸುತ್ತಲಿದ್ದರೆ, ನನ್ನ ದೂತರಲ್ಲಿ ನಂಬಿಕೆ ಇರಿಸಿ, ಅವರಿಗೆ ನೆರವಾಗುತ್ತಲಿದ್ದರೆ ಮತ್ತು ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುತ್ತಲಿದ್ದರೆ ನಾನು ಖಂಡಿತ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವೆನು ಮತ್ತು ನಿಮ್ಮನ್ನು, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆನು. ಇನ್ನು ಇದಾದ ಬಳಿಕ ನಿಮ್ಮ ಪೈಕಿ ಧಿಕ್ಕಾರಿಯಾದವನು ಖಂಡಿತವಾಗಿಯೂ ಸನ್ಮಾರ್ಗವನ್ನು ಕಳೆದುಕೊಂಡನು – (ಎಂದು ಅವರಿಗೆ ತಿಳಿಸಲಾಗಿತ್ತು)