Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 115 — Surah Al-Maidah 5:115

(ಪರಲೋಕದಲ್ಲಿ) ಅಲ್ಲಾಹನು; ‘‘ಮರ್ಯಮರ ಪುತ್ರ ಈಸಾ, ನೀವೇನು ಜನರೊಡನೆ – ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿಸಿಕೊಳ್ಳಿರಿ – ಎಂದು ಹೇಳಿದ್ದಿರಾ?’’ ಎಂದು ಕೇಳಿದಾಗ ಅವರು (ಈಸಾ) ಹೇಳುವರು; ‘‘ನೀನು ಪಾವನನು. ನನಗೆ ಹೇಳಲು ಹಕ್ಕೇ ಇಲ್ಲದಂತಹ ಮಾತನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಒಂದು ವೇಳೆ ನಾನು ಹಾಗೇನಾದರೂ ಹೇಳಿದ್ದರೆ ನಿನಗೆ ಅದರ ಅರಿವಿರುತ್ತಿತ್ತು. ನನ್ನ ಮನದೊಳಗೆ ಇರುವುದೆಲ್ಲವೂ ನಿನಗೆ ತಿಳಿದಿದೆ. ನಿನ್ನ ಮನದೊಳಗಿರುವ ಯಾವುದೂ ನನಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನೂ ಖಂಡಿತ ಬಲ್ಲವನು’’