ಕೊನೆಗೆ, ಅವರು ತಮ್ಮ ಕರಾರನ್ನು ಮುರಿದುದರಿಂದ ನಾವು ಅವರನ್ನು ಶಪಿಸಿದೆವು ಮತ್ತು ಅವರ ಮನಸ್ಸುಗಳನ್ನು ಕಠೋರಗೊಳಿಸಿದೆವು. ಅವರೀಗ ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ತಿರುಚಿ ಬಿಡುತ್ತಿದ್ದಾರೆ ಮತ್ತು ಅವರಿಗೆ ನೀಡಲಾಗಿದ್ದ ಬೋಧನೆಗಳ ದೊಡ್ಡ ಭಾಗವನ್ನು ಅವರು ಮರೆತು ಬಿಟ್ಟಿದ್ದಾರೆ. ಅವರಲ್ಲಿನ ಕೆಲವರ ಹೊರತು ಉಳಿದವರ ವಂಚನೆಯ ಸುದ್ದಿಗಳು ನಿಮಗೆ ಸದಾ ತಲುಪುತ್ತಲೇ ಇರುತ್ತವೆ. ಏನಿದ್ದರೂ ನೀವು ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಖಂಡಿತವಾಗಿಯೂ ಅಲ್ಲಾಹನು ಉದಾರಿಗಳನ್ನು ಪ್ರೀತಿಸುತ್ತಾನೆ