Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 18 — Surah Al-Maidah 5:18

ಗ್ರಂಥದವರೇ, ಇದೋ ನಿಮ್ಮ ಬಳಿಗೆ ನಮ್ಮ ದೂತರು ಬಂದು ಬಿಟ್ಟಿದ್ದಾರೆ ಮತ್ತು ನಿಮಗೆ ಸ್ಪಷ್ಟ ಬೋಧನೆ ನೀಡುತ್ತಿದ್ದಾರೆ. ದೇವದೂತರ ಆಗಮನ ಸರಣಿಯು (ಬಹುಕಾಲ) ಸ್ಥಗಿತಗೊಂಡ ಕಾರಣ ನೀವು, ಸುವಾರ್ತೆ ನೀಡುವ ಅಥವಾ ಎಚ್ಚರಿಕೆ ನೀಡುವ ಯಾರೂ ನಮ್ಮ ಬಳಿಗೆ ಬರಲಿಲ್ಲವೆಂದು ಹೇಳಬಾರದೆಂದು, ಇದೋ ನಿಮ್ಮ ಬಳಿಗೆ ಬಂದು ಬಿಟ್ಟಿದ್ದಾರೆ – ಸುವಾರ್ತೆ ನೀಡುವವರು ಮತ್ತು ಎಚ್ಚರಿಕೆ ನೀಡುವವರು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ