ಅದರಲ್ಲಿ (ತೌರಾತ್‌ನಲ್ಲಿ) ನಾವು ಅವರಿಗೆ – ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ ಮತ್ತು ಹಲ್ಲಿಗೆ ಹಲ್ಲು ಪರಿಹಾರವೆಂದು ಮತ್ತು ಗಾಯಗಳಿಗೂ ಪರಿಹಾರವಿದೆ ಎಂದು, ಹಾಗೆಯೇ ಪ್ರತೀಕಾರದ ಹಕ್ಕನ್ನು ಕ್ಷಮಿಸಿ ಬಿಟ್ಟವನಿಗೆ ಅದಕ್ಕಾಗಿ ಪರಿಹಾರ ಧನ ಉಂಟೆಂದು ವಿಧಿಸಿದ್ದೆವು. ಇನ್ನು ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಅಕ್ರಮಿಗಳಾಗಿರುತ್ತಾರೆ