ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಅವರೆಡೆಗೆ ಧಾವಿಸಿ ಹೋಗುವುದನ್ನು ನೀವು ಕಾಣುವಿರಿ. ‘‘ನಮ್ಮನ್ನು ಕಾಲಚಕ್ರವು ಬಾಧಿಸೀತೆಂಬ (ಆಪತ್ಕಾಲ ಬಂದೀತೆಂಬ) ಭಯ ನಮಗಿದೆ‘‘ ಎಂದು ಅವರು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು (ಶೀಘ್ರದಲ್ಲೇ) ವಿಜಯವನ್ನು ತಂದು ಕೊಡುವ ಅಥವಾ ತನ್ನ ಕಡೆಯಿಂದ ಒಂದು ವಿಶೇಷ ಆದೇಶವನ್ನು ಕಳುಹಿಸುವ ಸಾಧ್ಯತೆ ಇದೆ. ಆಗ ಅವರು, ತಮ್ಮ ಮನಸ್ಸುಗಳೊಳಗೆ ಬಚ್ಚಿಟ್ಟಿರುವ ವಿಷಯಗಳ ಕುರಿತು ಪಶ್ಚಾತ್ತಾಪ ಪಡಬಹುದು