ನಾವು ಇಸ್ರಾಈಲರ ಸಂತತಿಗಳಿಂದ ಸ್ಪಷ್ಟ ಕರಾರನ್ನು ಪಡೆದಿದ್ದೆವು ಮತ್ತು ನಾವು ಅವರೆಡೆಗೆ ದೂತರನ್ನು ಕಳುಹಿಸಿದೆವು. ಅವರ ಸ್ವೇಚ್ಛೆಗೆ ವಿರುದ್ಧವಾದ ಯಾವುದಾದರೂ ಆದೇಶದೊಂದಿಗೆ ದೂತರು ಅವರ ಬಳಿಗೆ ಬಂದಾಗಲೆಲ್ಲಾ ಅವರಲ್ಲಿ ಕೆಲವರು ಅವರನ್ನು (ದೂತರನ್ನು) ತಿರಸ್ಕರಿಸಿದರು ಮತ್ತು ಕೆಲವರು ಅವರನ್ನು ಕೊಂದು ಬಿಟ್ಟರು