ನೀವು ಕೇವಲ ತಮಾಷೆಯಾಗಿ ಮಾಡಿದ ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ಮಾಡಿದ ಗಂಭೀರ ಪ್ರತಿಜ್ಞೆಗಳ ಕುರಿತು ಅವನು ಖಂಡಿತ ನಿಮ್ಮನ್ನು ವಿಚಾರಿಸುವನು. (ಅಂತಹ ಪ್ರತಿಜ್ಞೆ ಮುರಿದರೆ) ಅದಕ್ಕೆ ಪರಿಹಾರವಾಗಿ ನೀವು ನಿಮ್ಮ ಮನೆಯವರಿಗೆ ಉಣಿಸುವಂತಹ ಮಧ್ಯಮ ಮಟ್ಟದ ಭೋಜನವನ್ನು ಹತ್ತು ಮಂದಿ ಬಡವರಿಗೆ ಉಣಿಸಬೇಕು ಅಥವಾ ಅವರಿಗೆ (ಅಷ್ಟು ಮಂದಿಗೆ) ಬಟ್ಟೆ ಉಡಿಸಬೇಕು ಅಥವಾ ಒಬ್ಬ ಗುಲಾಮನನ್ನು ದಾಸ್ಯದಿಂದ ಮುಕ್ತಗೊಳಿಸಬೇಕು. ಇದನ್ನು ಮಾಡಲಾಗದವನು ಮೂರು ದಿನ ಉಪವಾಸ ಆಚರಿಸಬೇಕು. ಇದು, ನೀವು ಪ್ರತಿಜ್ಞೆ ಮಾಡಿದ ಬಳಿಕ ಪ್ರತಿಜ್ಞೆಯನ್ನು ಮುರಿದುದಕ್ಕೆ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಸದಾ ಪಾಲಿಸಿರಿ. ನೀವು ಸದಾ ಕೃತಜ್ಞರಾಗಿರಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ