ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡುತ್ತಿರುವವರು (ಗತಕಾಲದಲ್ಲಿ) ಏನನ್ನು ತಿಂದಿದ್ದರೂ, ಅವರು ಧರ್ಮನಿಷ್ಠರೂ, ವಿಶ್ವಾಸಿಗಳೂ ಆಗಿದ್ದು ಸತ್ಕರ್ಮಗಳನ್ನು ಮಾಡುತ್ತಿರುವವರಾಗಿದ್ದರೆ ಮತ್ತು ಸದಾ ಧರ್ಮನಿಷ್ಠರೂ, ಸತ್ಯದಲ್ಲಿ ನಂಬಿಕೆ ಉಳ್ಳವರೂ, ಕೆಡುಕುಗಳಿಂದ ದೂರ ಉಳಿಯುವವರೂ, ಸೌಜನ್ಯ ತೋರುವವರೂ ಆಗಿದ್ದರೆ, ಅವರ ಮೇಲೆ ಪಾಪವೇನಿಲ್ಲ. ಅಲ್ಲಾಹನು ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ