Back to Languages

Kannada - Chapter 5 - Al-Maidah

Translation by Abdussalam Puthige — Permalink

Verse 94 — Surah Al-Maidah 5:94

ವಿಶ್ವಾಸಿಗಳೇ, ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಬೇಟೆಯ ಪ್ರಾಣಿಯನ್ನು ಕೊಲ್ಲಬೇಡಿ. ಇನ್ನು ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕ ಅದನ್ನು ಕೊಂದಿದ್ದರೆ – ಅವನು ಕೊಂದ ಪ್ರಾಣಿಗೆ ಸಮನಾಗಿರುವ ನಾಡಪ್ರಾಣಿಯೇ ಅದಕ್ಕೆ ಪರಿಹಾರವಾಗಿದೆ. ಈ ವಿಷಯದಲ್ಲಿ ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ತೀರ್ಪು ನೀಡಲಿ. ಈ ಪರಿಹಾರವನ್ನು ಕಾಣಿಕೆಯಾಗಿ ಕಅ್ಬ: ಭವನಕ್ಕೆ ತಲುಪಿಸಬೇಕು. ಅಥವಾ (ಪರಿಹಾರವಾಗಿ) ಕೆಲವು ಬಡವರಿಗೆ ಆಹಾರ ಉಣಿಸಬೇಕು. ಅಥವಾ, ಅದಕ್ಕೆ ಸಮನಾಗುವಷ್ಟು ಉಪವಾಸ ಆಚರಿಸಬೇಕು. ಅವನು ತನ್ನ ಕೃತ್ಯದ ಫಲವನ್ನು ಅನುಭವಿಸಲೆಂದು (ಇದನ್ನು ವಿಧಿಸಲಾಗಿದೆ). ಹಿಂದೆ ಗತಿಸಿ ಹೋದುದನ್ನೆಲ್ಲಾ ಅಲ್ಲಾಹನು ಕ್ಷಮಿಸಿರುವನು. ಇದೀಗ ಅದನ್ನೇ ಪುನರಾವರ್ತಿಸುವವರ ವಿರುದ್ಧ ಅಲ್ಲಾಹನು ಪ್ರತೀಕಾರ ತೀರಿಸುವನು. ಅಲ್ಲಾಹನು ಭಾರೀ ಪ್ರಬಲನೂ ಪ್ರತೀಕಾರ ತೀರಿಸಬಲ್ಲವನೂ ಆಗಿದ್ದಾನೆ