ಅಲ್ಲಾಹನು ಪವಿತ್ರ ಭವನ ಕಅ್ಬ:ವನ್ನು ಮಾನವರ ಆಶ್ರಯ ಧಾಮವಾಗಿಸಿರುವನು. ಹಾಗೆಯೇ, ಪವಿತ್ರ ತಿಂಗಳುಗಳು, ಬಲಿಪ್ರಾಣಿ ಮತ್ತು ಕೊರಳಪಟ್ಟಿಯಿರುವ (ಹರಕೆಯ) ಪ್ರಾಣಿಗಳು (ಅವನ ಸಂಕೇತಗಳಾಗಿವೆ). ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು ಮತ್ತು ಅಲ್ಲಾಹನು ಪ್ರತಿಯೊಂದು ವಿಷಯದ ಜ್ಞಾನ ಉಳ್ಳವನು ಎಂಬುದು ನಿಮಗೆ ತಿಳಿದಿರಬೇಕೆಂದು (ಇದನ್ನೆಲ್ಲಾ ನಿಮಗೆ ವಿವರಿಸಲಾಗುತ್ತಿದೆ)