ಅವನೇ, ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು ಪ್ರಥಮ ಉಚ್ಚಾಟನೆಯ ವೇಳೆ ಅವರ ಮನೆಗಳಿಂದ ಹೊರಡಿಸಿದವನು. ಅವರು ಹೊರಡುವರೆಂದು ನೀವೆಂದೂ ಭಾವಿಸಿರಲಿಲ್ಲ. ಅತ್ತ ಅವರು, ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ರಕ್ಷಿಸಬಲ್ಲವೆಂದು ಭಾವಿಸಿ ಕೊಂಡಿದ್ದರು. ಆದರೆ ಅಲ್ಲಾಹನು ಅವರೆಂದೂ ಊಹಿಸಿಲ್ಲದ ಕಡೆಯಿಂದ ಅವರ ಬಳಿಗೆ ಬಂದನು – ಮತ್ತು ಅವರ ಮನಸ್ಸುಗಳಲ್ಲಿ ಭೀತಿಯನ್ನು ಬಿತ್ತಿದನು. (ಇದರ ಫಲವಾಗಿ) ಅವರು ಸ್ವತಃ ತಮ್ಮ ಕೈಗಳಿಂದ ತಮ್ಮ ನಿವಾಸಗಳನ್ನು ಕೆಡವಿ ಹಾಕ ತೊಡಗಿದರು. ವಿಶ್ವಾಸಿಗಳ ಕೈಗಳಿಂದಲೂ (ಅದನ್ನೇ ಮಾಡಿಸಲಾಯಿತು). ದೃಷ್ಟಿಯುಳ್ಳವರೇ, ಪಾಠ ಕಲಿಯಿರಿ