ಅಲ್ಲಾಹನು ಯಾರಿಗೆ ಸರಿದಾರಿ ತೋರಬಯಸುತ್ತಾನೋ ಅವನ ಮನಸ್ಸನ್ನು ಇಸ್ಲಾಮಿನ ಪಾಲಿಗೆ ತೆರೆದು ಬಿಡುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸ ಬಯಸುತ್ತಾನೋ ಆತನ ಮನಸ್ಸನ್ನು ಮುದುಡಿಸಿ ತೀರಾ ಸಂಕುಚಿತಗೊಳಿಸಿ ಬಿಡುತ್ತಾನೆ. (ಸತ್ಯ ದರ್ಶನವು) ಅವನ ಪಾಲಿಗೆ, ಆಕಾಶಕ್ಕೆ ಮೆಟ್ಟಿಲೇರುವುದೋ ಎಂಬಷ್ಟು ಕಠಿಣ ಕಾರ್ಯವಾಗಿ ಬಿಡುತ್ತದೆ. ಈ ರೀತಿ ಅಲ್ಲಾಹನು ಸತ್ಯವನ್ನು ನಂಬದವರ ಮೇಲೆ ಕಳಂಕವನ್ನು ಹೊರಿಸುತ್ತಾನೆ