Back to Languages

Kannada - Chapter 6 - Al-Anam

Translation by Abdussalam Puthige — Permalink

Verse 140 — Surah Al-Anam 6:140

ಅವನೇ, ಮಂಟಪವಿರುವ (ಉದಾ: ದ್ರಾಕ್ಷಿ) ಹಾಗೂ ಮಂಟಪವಿಲ್ಲದ ತೋಟಗಳನ್ನು, ಖರ್ಜೂರವನ್ನು, ವಿವಿಧ ಬಗೆಯ ಬೆಳೆಗಳನ್ನು ಮತ್ತು ಸಮರೂಪಿಗಳಾಗಿಯೂ, ಭಿನ್ನ ರೂಪಿಗಳಾಗಿಯೂ ಇರುವ ಝೈತೂನ್ (ಇಪ್ಪೆ) ಹಾಗೂ ದಾಳಿಂಬೆಗಳನ್ನು ಸೃಷ್ಟಿಸಿದವನು. ಅವು ಫಲ ನೀಡಿದಾಗ ಅವುಗಳ ಫಲವನ್ನು ತಿನ್ನಿರಿ ಮತ್ತು ಅವುಗಳ ಬೆಳೆ ಕೊಯ್ಯುವ ದಿನ ಅವುಗಳ ಬಾಧ್ಯತೆಯನ್ನು (ಉಶ್ರ್ ಅಥವಾ ಹತ್ತನೇ ಒಂದಂಶ ದಾನವನ್ನು) ಪಾವತಿಸಿರಿ. ಅಪವ್ಯಯ ಮಾಡಬೇಡಿ. ಅಪವ್ಯಯ ಮಾಡುವವರನ್ನು ಅವನು (ಅಲ್ಲಾಹನು) ಖಂಡಿತ ಮೆಚ್ಚುವುದಿಲ್ಲ